ಬಿ.ಇ ಪದವಿ ಪಡೆದು ಸಾಧನೆ ಗೈದ ಕುಮಾರಿ ಮೇಘಾ ಆರಿ
ಬೆಳಗಾವಿ :ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿ.ಟಿ.ಯು.) ಸಂಯೋಜನೆಗೆ ಒಳಪಟ್ಟಿರುವ ಬೆಂಗಳೂರಿನ (ದೇವನಹಳ್ಳಿ ಸಮೀಪದ) ನಾಗಾರ್ಜುನ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಮೇಘಾ ಆರಿ ಅವರು ತಮ್ಮ ಬಿ.ಇ (ಇಂಜಿನಿಯರಿಂಗ್) ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ವಿಶ್ವವಿದ್ಯಾಲಯವು ಅವರಿಗೆ ಅಧಿಕೃತ ಪದವಿ ಪ್ರಮಾಣ ಪತ್ರ ನೀಡಿ ಗೌರವಿಸಿದೆ.
ಅಂಕಲಿ ಪೊಲೀಸ್ ಠಾಣೆಯ ಹೆಮ್ಮೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಲಕ್ಷ್ಮಪ್ಪ ಆರಿ ಅವರ ಪುತ್ರಿಯಾದ ಮೇಘಾ ಆರಿ ಅವರು, ತಮ್ಮ ನಿರಂತರ ಶ್ರಮ, ಶಿಸ್ತು ಹಾಗೂ ಅಭ್ಯಾಸದ ಬಲದಿಂದ ಈ ಸಾಧನೆ ಮಾಡಿದ್ದಾರೆ.
ಕುಮಾರಿ ಮೇಘಾ ಆರಿ ಅವರ ಈ ತಾಂತ್ರಿಕ ಶಿಕ್ಷಣದ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಕುಟುಂಬಸ್ಥರು, ಸಾರ್ವಜನಿಕರು ಮತ್ತು ಅಂಕಲಿ ಭಾಗದ ಗ್ರಾಮಸ್ಥರು ಅಪಾರ ಹರ್ಷ ವ್ಯಕ್ತಪಡಿಸಿ, ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
Space for Advertisement