
ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚಿಕ್ಕೋಡಿ ಮಹಿಳಾ ಮಹಾವಿದ್ಯಾಲಯದ ತಂಡಕ್ಕೆ ಪ್ರಥಮ ಸ್ಥಾನ
ಚಿಕ್ಕೋಡಿ:ಸಿ.ಟಿ.ಇ. ಸಂಸ್ಥೆಯ ಶ್ರೀಮತಿ ಅಹಲ್ಯಾಬಾಯಿ ಅ. ಪಾಟೀಲ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಚಿಕ್ಕೋಡಿ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಇವುಗಳ ಸಂಯುಕ್ತಾಶ್ರಯದಲ್ಲಿ 2026-27ನೇ ಸಾಲಿನ ಅಂತರ್ ಮಹಾವಿದ್ಯಾಲಯಗಳ ಬ್ಯಾಡ್ಮಿಂಟನ್ ಪಂದ್ಯಾವಳಿಯು ದಿನಾಂಕ 5 ಅಕ್ಟೋಬರ್ 2026 ರಂದು ಯಶಸ್ವಿಯಾಗಿ ನಡೆಯಿತು.
ಈ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಎಸ್.ವಿ.ಎಮ್. ಮಹಿಳಾ ಮಹಾವಿದ್ಯಾಲಯ ಇಳಕಲ್ಲ ತಂಡ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ತಂಡಗಳನ್ನು ಮಣಿಸಿ, ಸ್ಥಳೀಯ ಸಿ.ಟಿ.ಇ. ಸಂಸ್ಥೆಯ ಶ್ರೀಮತಿ ಅಹಲ್ಯಾಬಾಯಿ ಅ. ಪಾಟೀಲ ಕಲಾ & ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಚಿಕ್ಕೋಡಿ ತಂಡವು ಭರ್ಜರಿ ಜಯಗಳಿಸಿ ವಿಜಯಶಾಲಿಯಾಯಿತು.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಚಿಕ್ಕೋಡಿ ತಂಡಕ್ಕೆ ಸಿ.ಟಿ.ಇ. ಸಂಸ್ಥೆಯ ವೈಸ್ ಚೇರ್ಮನ್ ಆದ ಶ್ರೀ ವೈ. ಎಸ್. ಮಾಂಜರೇಕರ ಅವರು 5000/- ರೂಪಾಯಿ (ಐದು ಸಾವಿರ ರೂಪಾಯಿ ಮಾತ್ರ) ನಗದು ಬಹುಮಾನವನ್ನು ವಿತರಿಸಿ ಗೌರವಿಸಿದರು.
ಅಲ್ಲದೆ, ಪಂದ್ಯಾವಳಿಯ ‘ಶ್ರೇಷ್ಠ ಆಟಗಾರ್ತಿ’ಯಾಗಿ ಆಯ್ಕೆಯಾದ ವಿದ್ಯಾರ್ಥಿನಿ ಕುಮಾರಿ ಶ್ರದ್ಧಾ ಪಾಟೀಲ ಇವಳಿಗೆ 1000/- ರೂಪಾಯಿ (ಒಂದು ಸಾವಿರ ರೂಪಾಯಿ ಮಾತ್ರ) ನಗದು ಬಹುಮಾನವನ್ನು ನೀಡಿ ಶುಭ ಹಾರೈಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಎಸ್. ಸಿ. ಜಕಾತಿ, ವಿಶ್ವವಿದ್ಯಾಲಯದ ಡಾ. ಜ್ಯೋತಿಲುಪಾಧ್ಯ, ಹಾಗೂ ಶ್ರೀ ಶಿವಕುಮಾರ ಗಡಶೆಟ್ಟಿ, ಶ್ರೀ ವೈ. ಟಿ. ಬಿಕ್ಕಣ್ಣವರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ತಂಡಗಳು, ವ್ಯವಸ್ಥಾಪಕರು, ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
Space for Advertisement