
ಕೇರೂರ ಗ್ರಾಮದಲ್ಲಿ 60 ಲಕ್ಷ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಗಣೇಶ ಹುಕ್ಕೇರಿ
ಚಿಕ್ಕೋಡಿ:ಕೇರೂರ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಹಾಳಾಗಿದ್ದ ರಸ್ತೆ ಹಾಗೂ ಚರಂಡಿಗಳ ಸುಧಾರಣೆಗಾಗಿ ₹೫೦ ಲಕ್ಷ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕಾಗಿ ಮೊದಲ ಹಂತದ ₹೧೦ ಲಕ್ಷ ಅನುದಾನ ಸೇರಿದಂತೆ ಒಟ್ಟು ₹೬೦ ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಶಾಸಕ ಗಣೇಶ ಪ್ರಕಾಶ ಹುಕ್ಕೇರಿ ಅವರು ಶುಕ್ರವಾರ ನೆರವೇರಿಸಿದರು.
ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಚರಂಡಿ ಮತ್ತು ರಸ್ತೆಗಳು ತೀವ್ರವಾಗಿ ಹಾಳಾಗಿದ್ದು, ಸಂಚಾರಕ್ಕೆ ದುಸ್ತರವಾಗಿದ್ದರಿಂದ ಅಲ್ಲಿನ ಸಾರ್ವಜನಿಕರು ರಸ್ತೆ ಹಾಗೂ ಚರಂಡಿ ಸುಧಾರಣೆಗೆ ಮನವಿ ಮಾಡಿಕೊಂಡಿದ್ದರು. ಸಾರ್ವಜನಿಕರ ಈ ಮನವಿಗೆ ಸ್ಪಂದಿಸಿ, ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ₹೫೦ ಲಕ್ಷ ಅನುದಾನ ಮಂಜೂರಾಗಿದೆ.
ಅಷ್ಟೇ ಅಲ್ಲದೆ, ಗ್ರಾಮದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸಲು ಅನುವಾಗುವಂತೆ ₹೬೦ ಲಕ್ಷ ವೆಚ್ಚದ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದ್ದು, ಅದರ ಮೊದಲ ಕಂತಿನ ₹೧೦ ಲಕ್ಷ ಅನುದಾನದ ಸಿ.ಸಿ ರಸ್ತೆ ಮತ್ತು ಭವನದ ನಿರ್ಮಾಣ ಕಾಮಗಾರಿಗೆ ಶಾಸಕರು ಅಮೃತ ಹಸ್ತದಿಂದ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ ಅವರು, "ಕೇರೂರ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕಳೆದ ೩ ವರ್ಷಗಳಲ್ಲಿ ಗ್ರಾಮದಲ್ಲಿ ೧೧೦ ಕೆ.ವಿ. ವಿದ್ಯುತ್ ಸಬ್ಸ್ಟೇಷನ್ ನಿರ್ಮಾಣ, ಪ್ರಮುಖ ರಸ್ತೆ ಮತ್ತು ಚರಂಡಿಗಳ ಸುಧಾರಣೆ, ದೇವಸ್ಥಾನಗಳ ಜೀರ್ಣೋದ್ಧಾರ, ಸಮುದಾಯ ಭವನಗಳು ಹಾಗೂ ಮಸೀದಿಗಳ ನಿರ್ಮಾಣ ಮತ್ತು ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆಗಾಗಿ ಸುಮಾರು ₹೫೪ ಕೋಟಿಗೂ ಅಧಿಕ ಅನುದಾನವನ್ನು ನೀಡಲಾಗಿದ್ದು, ವಿವಿಧ ಕಾಮಗಾರಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ," ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಪಾಟೀಲ, ವೀರೇಂದ್ರ ಪಾಟೀಲ, ವಿಠ್ಠಲ ವಾಳಕೆ, ಪ್ರಕಾಶ ಬ್ಯಾಳೆ, ಅಪ್ಪಾಸಾಬ ಬ್ಯಾಳೆ, ರಾಮಾ ಕಾಂಬಳೆ, ನೀಲಕಂಠ ಕಾಂಬಳೆ, ಸುರೇಶ ಬಾಡಕರ, ಮಹೇಶ ಪಾಟೀಲ, ಅಲಿ ಮುಲ್ಲಾ, ಅರುಣ ಹವಾಲ್ದಾರ, ಚನಗೌಡಾ ಪಾಟೀಲ, ಅಜೀತ ಗಾಂಜಾಗೋಳ, ರವಿ ಪಾಟೀಲ, ಸಚೀನ ಮಾಳಗೆ, ಶಿವಾನಂದ ಕಾಂಬಳೆ, ನಯನ ಕಟ್ಟಿ, ಪರಶುರಾಮ ಕಾಳೆ, ಶಬ್ಬಿರ ಮುಲ್ಲಾ, ಖಾನಪ್ಪಾ ಬಾಡಕರ, ನಿಂಗಗೌಡಾ ಪಾಟೀಲ, ಶಿವಪ್ಪಾ ಪೂಜಾರಿ, ಗಂಗಾಧರ ಕಾಂಬಳೆ, ದುಂಡಪ್ಪಾ ಖಿನ್ನವರ, ರಾಜಾಸಾಬ ಸಯ್ಯದ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಅಲ್ಲದೆ, ಗುತ್ತಿಗೆದಾರರಾದ ರಾವ ಗುಡೆ, ಅಭಿಯಂತರರಾದ ಎಂಟೆತ್ತೆನ್ನವರ, ಕಾಮಕರ ಹಾಗೂ ಶಿಂಧೆ ಅವರು ಉಪಸ್ಥಿತರಿದ್ದರು.
Space for Advertisement