ಚಿಕ್ಕೋಡಿ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರ್ರಿಯ ಮಹಿಳಾ ದಿನಾಚರಣೆ

ಚಿಕ್ಕೋಡಿ: ಕೆ.ಎಲ್.ಇ ಇಂಜಿನೀಯರಿಂಗ್ ಕಾಲೇಜಿನಲ್ಲಿ ಅಂತರಾಷ್ಟ್ರ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಶ್ರೀಮತಿ. ರತ್ನಾ ಆರ್. ಕುಲಕರ್ಣಿ, ಸಂಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು, ಎಸ್. ಬಿ. ಇನಫೊಟೆಕ್ ಪ್ರಾಯಿವೆಟ್ ಲಿಮಿಟೆಡ್, ಬೆಳಗಾವಿ ಮಾತನಾಡಿ-
ಮಹಿಳೆಯರ ಜೀವನವೇ ಒಂದು ಹೊರಾಟ. ಈ ಹೊರಾಟ ಮಿರಿ ಮೇಲೆ ಬರುವುದು ಮುಖ್ಯ. ನಾವು ಒಂದು ತರಬೇತಿ ಸಂಸ್ಥೆಯನ್ನು ಕಟ್ಟಿ, 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌಶಲಗಳ ತರಬೇತಿ ನೀಡಿ, ನೌಕರಿ ಕೊಡಿಸಿರುವುದು ಸಂತಸ ತಂದಿದೆ ಎಂದರು. ಇಂದಿನ ಸಮಾಜದಲ್ಲಿ ಸಮಾನ ಹಕ್ಕು, ಸಮಾನ ಅವಕಾಶಗಳಿದ್ದು, ಮಹಿಳೆಯರಿಗೆ ಒಳ್ಳೇಯ ವಾತಾವರಣವಿದೆ.
ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ –
ನಮ್ಮನ್ನು ನಾವು ನೆನೆಸಿಕೊಳ್ಳುವ ಕಾಲ. ಮಹಿಳೆ ತನ್ನ ಮನೆಯಲ್ಲಿ ಮಗಳಾಗಿ, ಮಡದಿಯಾಗಿ ತಾಯಿಯಾಗಿ ತನ್ನ ಕಾರ್ಯವನ್ನು ಸಮರ್ಥವಾಗಿ, ಜವಾಬ್ದಾರಿಯುತವಾಗಿ ನಿಭಾಯಿಸುತ್ತಾಳೆ. ಮಹಿಳೆಯ ತ್ಯಾಗಕ್ಕಾಗಿ ಪ್ರತಿಯೊಂದು ಕುಟುಂಬದಲ್ಲಿ ಅವಳಿಗೆ ಹೆಚ್ಚು ಪ್ರೀತಿ, ಗೌರವ ನೀಡಲಾಗುತ್ತದೆ.
ಸಿಂಧುತಾಯಿ ಸಪಕಾಲ ಸಾವಿರಾರು ಮಕ್ಕಳನ್ನು ಸಾಕಿ, ಬೆಳೆಸಿ ಅನೇಕ ಮಕ್ಕಳ ಮಾಯಿ ಎಂದೇ ಪ್ರಸಿದ್ದಿ ಹೊಂದಿದ್ದಾಳೆ. ಜೀವನ ಅಪರಿಮಿತ. ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಲಿಂಗ ಅಸಮಾನತೆಯನ್ನು ಮಿರಿ ಬೆಳೆಯಿರಿ ಎಂದರು. ಮೆಕ್ಯಾನಿಕಲ್ ಇಂಜಿನಿಯರ್ ಆದ ಸುಧಾಮುರ್ತಿ ಯವರ ಇನಫೊಸಿಸ್ ನಂಥಹ ದೊಡ್ಡಸಂಸ್ಥೆಯನ್ನು ಕಟ್ಟಿದ್ದು, ಅವರಲ್ಲಿನ ಬಲವಾದ ಆತ್ಮವಿಶ್ವಾಸದಿಂದ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಸಂಶೋಧನಾ ಸಂಯೋಜಕರಾದ ಡಾ. ಸಂಜಯ ಪೂಜಾರಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಾಧಕಿಯರು ಯುನಿವರ್ಸಿಟಿ ಬ್ಲಿವ್ ಆಗಿ ಆಯ್ಕೆಯಾದ ಕು. ಸಪ್ನಾ ಖೋತ, ಕು. ಶೋಭಾ ಮುರಚಿಟ್ಟೆ, ನಿಶಾ ಮಳಗಾವಿ, ಸಹನಾ ಜಾವೆದ್ ಲಾಟೆ, ಎನ್‍ಸಿಸಿಯಲ್ಲಿ ಸಾಧನೆಗೈದ ಕು. ಕವಿತಾ ಕನ್ವಿ, ಮಾಧುರಿ ಚೌಗಲಾ ಅವರನ್ನ ಸತ್ಕರಿಸಲಾಯಿತು.
ಕು. ಪ್ರೇರಣಾ ಜಾನ್ವೆಕರ ಮಿಸ್ ಕೆಎಲ್‍ಇ ಸಿಇಟಿ ಪ್ರಶಸ್ತಿ ಪಡೆದುಕೊಂಡರು.
ಮಹಿಳಾ ಘಟಕದ ಸಂಯೋಜಕಿ ಪ್ರೊ. ವಿದ್ಯಾ ಅಂಗಡಿ ವಾರ್ಷಿಕ ವರದಿ ವಾಚನ ಮಾಡಿದರು.
ಕು. ಶ್ರೇಯಾ ಹಾಗೂ ತಂಡದವರು ಸ್ವಾಗತ ಗೀತೆಯನ್ನು ಹಾಡಿದರು.
ಕು. ಸಂಕೇತಾ ಕುಂಬಾರ ಸ್ವಾಗತಿಸಿದರು.
ಕು. ಸಾಕ್ಷಿ ಅಂಗಡಿ ಅಥಿತಿಯನ್ನು ಪರಿಚಯಿಸಿದರು.
ಕು. ತನ್ವಿ ನಿಲಕಂಠನವರ ಮತ್ತು ಕು. ಶ್ರೀರಕ್ಷಾ ತೆಲಸಂಗ ನಿರೂಪಿಸಿದರು.
ಕು. ಶಿವಾಣಿ ಕಿಲ್ಲೆದಾರ ವಂದಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲ ವಿಭಾಗ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ಹಾಗೂ ಕಾಲೇಜಿನ ಎಲ್ಲ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *